2026_Calendar_Vachanas

ತಿಂಗಳು &
ವಚನಕಾರರು
ವಚನ 1 ವಚನ 2
ಜನವರಿ 2026
ವಿಶ್ವಗುರು ಬಸವಣ್ಣ
ದೇವಲೋಕ, ಮರ್ತ್ಯಲೋಕವೆಂಬ ಸೀಮೆಯುಳ್ಳನ್ನಕ್ಕ।
ಕೇವಲ ಶರಣನಾಗಲರಿಯೆ। ಸತ್ತು ಬೆರಸಿಹೆನೆಂದರೆ,।
ಕಬ್ಬಿನ ತುದಿಯ ಮೆಲಿದಂತೆ।
ಕೂಡಲಸಂಗಮದೇವಾ॥
ಜಗದಗಲ, ಮುಗಿಲಗಲ, ಮಿಗೆಯಗಲ ನಿಮ್ಮಗಲ।
ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ।
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ।
ಅಗಮ್ಯ, ಅಗೋಚರ, ಅಪ್ರತಿಮ ಲಿಂಗವೆ।
ಕೂಡಲಸಂಗಮದೇವಯ್ಯಾ,।
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ॥
ಫೆಬ್ರುವರಿ 2026
ಅರಿವಿನಗುರು ಅಲ್ಲಮಪ್ರಭು
ಮಾರ್ಚ್ 2026
ಚಿನ್ಮಯಜ್ಞಾನಿ ಚೆನ್ನಬಸವಣ್ಣ
ಏಪ್ರಿಲ್ 2026
ಶಿವಯೋಗಿ ಸಿದ್ಧಾರಮೇಶ್ವರ
ಮೇ 2026
ಅಕ್ಕ ಮಹಾದೇವಿ
ಜೂನ್ 2026
ತಾಯಿ ನೀಲಾಂಬಿಕೆ
ಜುಲೈ 2026
ಅಕ್ಕ ನಾಗಲಾಂಬಿಕೆ
ಆಗಸ್ಟ್ 2026
ಕಾಯಕಯೋಗಿ ನುಲಿಯ ಚಂದಯ್ಯ
ಸೆಪ್ಟಂಬರ್ 2026
ಅಕ್ಟೋಬರ್ 2026
ಜಗದ್ಗುರು ರೇವಣಸಿದ್ಧ
ನವೆಂಬರ್ 2026
ವಿಶ್ವಬಂಧು ಮರುಳಸಿದ್ಧ
ಡಿಸೆಂಬರ್ 2026
ತೋಂಟದ ಸಿದ್ಧಲಿಂಗ ಶಿವಯೋಗಿ

ಜನವರಿ 2026:

ದೇವಲೋಕ, ಮರ್ತ್ಯಲೋಕವೆಂಬ ಸೀಮೆಯುಳ್ಳನ್ನಕ್ಕ।
ಕೇವಲ ಶರಣನಾಗಲರಿಯೆ।
ಸತ್ತು ಬೆರಸಿಹೆನೆಂದರೆ, ಕಬ್ಬಿನ ತುದಿಯ ಮೆಲಿದಂತೆ।
ಕೂಡಲಸಂಗಮದೇವಾ॥
ವಿಶ್ವಗುರು ಬಸವಣ್ಣನವರು

ಜಗದಗಲ, ಮುಗಿಲಗಲ, ಮಿಗೆಯಗಲ ನಿಮ್ಮಗಲ।
ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ।
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ।
ಅಗಮ್ಯ, ಅಗೋಚರ, ಅಪ್ರತಿಮ ಲಿಂಗವೆ।
ಕೂಡಲಸಂಗಮದೇವಯ್ಯಾ,।
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ॥
ವಿಶ್ವಗುರು ಬಸವಣ್ಣನವರು

ಫೆಬ್ರುವರಿ 2026:

ಅರಿಯದ ಕಾರಣ ಕುರುಹುವಿಡಿವೆನಲ್ಲದೆ ।
ಅರಿದ ಬಳಿಕ ಇನ್ನೇನೊ? ।
ಬಿಟ್ಟಡೆ ಸಮಯ ವಿರೋಧ । ಬಿಡದಿದ್ದರೆ ಜ್ಞಾನ ವಿರೋಧ ।
ಗುಹೇಶ್ವರಲಿಂಗವು ಉಭಯ ದಳದ ಮೇಲೈದಾನೆ,
ಕಾಣಾ ಸಿದ್ಧರಾಮಯ್ಯಾ ॥
ಅರಿವಿನಗುರು ಅಲ್ಲಮಪ್ರಭುದೇವರು

ಸುತ್ತಿಸುತ್ತಿ ಬಂದಡಿಲ್ಲ, ಲಕ್ಷ ಗಂಗೆಯ ಮಿಂದಡಿಲ್ಲ.
ತುಟ್ಟ ತುದಿಯ ಮೇರುಗಿರಿಯ ಮೆಟ್ಟಿ ಕೂಗಿದಡಿಲ್ಲ.
ನಿತ್ಯನೇಮದಿಂದ ತನುವ ಮುಟ್ಟಿಕೊಂಡಡಿಲ್ಲ.
ನಿಚ್ಚಕ್ಕೆ ನಿಚ್ಚ ನೆನೆವ ಮನವ ಅಂದಂದಿಂಗೆ
ಅತ್ತಲಿತ್ತ ಹರಿವ ಮನವ ಚಿತ್ತದಲ್ಲಿ ನಿಲಿಸಬಲ್ಲಡೆ
ಬಚ್ಚಬರಿಯ ಬೆಳಗು ಗುಹೇಶ್ವರನೆಂಬ ಲಿಂಗವು.
ಅರಿವಿನಗುರು ಅಲ್ಲಮಪ್ರಭುದೇವರು

ಮಾರ್ಚ್ 2026:

ಆಯತಲಿಂಗದಲ್ಲಿ ಆಚಾರವರತು,
ಸ್ವಾಯತಲಿಂಗದಲ್ಲಿ ವಿಚಾರವರತು,
ಸನ್ನಹಿತಲಿಂಗದಲ್ಲಿ ಅನುಭಾವವರತು,
ಈ ತ್ರಿವಿಧದಲ್ಲಿ ತ್ರಿವಿಧವರತಡೆ
ಒಂದಲ್ಲದೆರಡುಂಟೆ ಕೂಡಲಚೆನ್ನಸಂಗಾ ನಿಮ್ಮಲ್ಲಿ?
— ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು

ಆದಿ ಬಸವಣ್ಣ, ಅನಾದಿಲಿಂಗವೆಂದೆಂಬರು,
ಹುಸಿ ಹುಸಿ, ಈ ನುಡಿಯ ಕೇಳಲಾಗದು.
ಆದಿ ಲಿಂಗ, ಅನಾದಿ ಬಸವಣ್ಣನು!
ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಪ್ರಸಾದವು ಬಸವಣ್ಣನನುಕರಿಸಲಾಯಿತ್ತು.
ಇಂತೀ ತ್ರಿವಿಧಕ್ಕೆ ಬಸವಣ್ಣನೆ ಕಾರಣನೆಂದರಿದೆನಯ್ಯಾ
ಕೂಡಲಚೆನ್ನಸಂಗಮದೇವಾ.
— ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು

ಏಪ್ರಿಲ್ 2026:

ಎಮ್ಮ ವಚನದೊಂದು ಪಾರಾಯಣಕ್ಕೆ, ವ್ಯಾಸನದೊಂದು ಪುರಾಣ ಸಮಬಾರದಯ್ಯಾ
ಎಮ್ಮ ವಚನದ ನೂರೆಂಟರಧ್ಯಯನಕ್ಕೆ, ಶತರುದ್ರೀಯಯಾಗ ಸಮಬಾರದಯ್ಯಾ
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ, ಗಾಯತ್ರಿ ಲಕ್ಷ ಜಪ ಸಮಬಾರದಯ್ಯಾ
ಕಪಿಲ ಸಿದ್ಧ ಮಲ್ಲಿಕಾರ್ಜುನಾ
— ಶಿವಯೋಗಿ ಸಿದ್ದರಾಮರು

ಶರಣನ ಜಾಗೃತಿಯೆ ಶಿವರಾತ್ರಿ ಕಂಡಾ ಮನವೆ.
ಶರಣನ ನಿದ್ರೆಯೆ ಶಿವಯೋಗಸಮಾಧಿ ಕಂಡಾ ಮನವೆ.
ಶರಣನ ನುಡಿಯೆ ಶ್ರೀರುದ್ರ ಪಂಚಬ್ರಹ್ಮೋಪನಿಷತ್ತು ಕಂಡಾ ಮನವೆ.
ಶರಣನ ನಡೆಯೆ ಮುಕ್ತಿಸೋಪಾನ ಕಂಡಾ ಮನವೆ.
ಶರಣನ ಭೋಜನವೆ ಕಪಿಲಸಿದ್ಧಮಲ್ಲಿಕಾರ್ಜುನನರ್ಪಣ ಕಂಡಾ ಮನವೆ.
— ಶಿವಯೋಗಿ ಸಿದ್ದರಾಮರು

ಮೇ 2026:

ಜಲದ ಮಂಟಪದ ಮೇಲೆ, ಉರಿಯ ಚಪ್ಪರವನಿಕ್ಕಿ, ಆಲಿಕಲ್ಲ ಹಸೆಯ ಹಾಸಿ, ಬಾಸಿಗವ ಕಟ್ಟಿ,
ಕಾಲಿಲ್ಲದ ಹೆಂಡತಿಗೆ, ತಲೆಯಿಲ್ಲದ ಗಂಡ, ಬಂದು ಮದುವೆಯಾದನು.
ಎಂದೆಂದೂ ಬಿಡದ ಬಾಳುವೆಗೆ ಕೊಟ್ಟರೆನ್ನ.
ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ ಮದುವೆಯ ಮಾಡಿದರೆಲೆ ಅವ್ವಾ.
— ಅಕ್ಕ ಮಹಾದೇವಿ

ಬಸವಣ್ಣನ ಭಕ್ತಿ, ಚೆನ್ನಬಸವಣ್ಣನ ಜ್ಞಾನ,
ಮಡಿವಾಳಯ್ಯನ ನಿಷ್ಠೆ, ಪ್ರಭುದೇವರ ಜಂಗಮಸ್ಥಲ,
ಅಜಗಣ್ಣನ ಐಕ್ಯಸ್ಥಲ, ನಿಜಗುಣನ ಆರೂಢಸ್ಥಲ,
ಸಿದ್ಧರಾಮಯ್ಯನ ಸಮಾಧಿಸ್ಥಲ,
ಇಂತಿವರ ಕರುಣಪ್ರಸಾದ ಎನಗಾಯಿತ್ತು ಚೆನ್ನಮಲ್ಲಿಕಾರ್ಜುನಯ್ಯಾ.
— ಅಕ್ಕ ಮಹಾದೇವಿ